ಬಶಿತಾ ರಹೀಂ
ರಾಜ್ಯ : ಕೇರಳ
ಜಿಲ್ಲೆ : തൃശൂർ (ತ್ರಿಶೂರ್)
ಬ್ಲಾಕ್ : ತಳಿಕುಳಂ
ಗ್ರಾಮ : ಏಂಗಂಡಿಯೂರು
ಸ್ವ-ಸಹಾಯ ಗುಂಪು : ಅನುಗ್ರಹ ಸ್ವ-ಸಹಾಯ ಗುಂಪು
ಜೀವನೋಪಾಯದ ಚಟುವಟಿಕೆಗಳು : ಅಣಬೆ ಬೇಸಾಯ, ಅಣಬೆ ಪುಡಿ ಉತ್ಪಾದನೆ, ಅಣಬೆ ತಿಂಡಿಗಳು, ಸ್ಪಾನ್ ಉತ್ಪಾದನಾ ಘಟಕ.
ಲಕ್ಷಪತಿ ದೀದಿ ಪಯಣ
ಬಶಿತಾ ಅವರ ಅಸಾಧಾರಣ ಪ್ರಯಾಣವು ಅವರ ಕಿರಿಯ ಮಗನ ಅನಾರೋಗ್ಯದಿಂದ ಪ್ರಾರಂಭವಾಯಿತು. ಮಗನ ಆರೋಗ್ಯಕ್ಕಾಗಿ ಅಣಬೆಗಳು ಉತ್ತಮ ಔಷಧವೆಂದು ವೈದ್ಯರು ಸಲಹೆ ನೀಡಿದರು. ನಂತರ ಅವರು ಅಣಬೆ ಬೇಸಾಯವನ್ನು ಪ್ರಾರಂಭಿಸಿದರು ಮತ್ತು ಇಂದು ಅದು ಅವರ ಕುಟುಂಬದ ಮುಖ್ಯ ಆದಾಯದ ಮೂಲವಾಗಿದೆ. ಆರ್ಥಿಕ ನೆರವು, ತಾಂತ್ರಿಕ ಜ್ಞಾನ ಮತ್ತು ಮಾನಸಿಕ ಬೆಂಬಲ ಸಿಕ್ಕಾಗ ಅವರ ಈ ಪ್ರಯಾಣವು ವೇಗ ಪಡೆದುಕೊಂಡಿತು. ಅವರು ಕೌಶಲ್ಯ ತರಬೇತಿ ಪಡೆದರು ಮತ್ತು ಕುಟುಂಬಶ್ರೀ (Kudumbashree) ಮೂಲಕ 5 ಲಕ್ಷ ರೂ. ಬ್ಯಾಂಕ್ ಸಾಲ ಮತ್ತು ಸಬ್ಸಿಡಿಯನ್ನು ಪಡೆದರು. ಈಗ ಅವರು ಹೊಸ ಸ್ಪಾನ್ (ಬೀಜ) ಉತ್ಪಾದನಾ ಘಟಕ ಮತ್ತು ಪ್ರಯೋಗಾಲಯವನ್ನು ಸ್ಥಾಪಿಸಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಇತರರಿಗೂ ತರಬೇತಿ ನೀಡಿದ್ದಾರೆ. ಪ್ರಸ್ತುತ ಅವರು ತಿಂಗಳಿಗೆ 25,000 ರೂ. ಆದಾಯ ಗಳಿಸುತ್ತಿದ್ದು, ಮಹಿಳಾ ಸಬಲೀಕರಣಕ್ಕೆ ಇವರೊಬ್ಬ ಉತ್ತಮ ಉದಾಹರಣೆಯಾಗಿದ್ದಾರೆ.