ಜಿಐಝಡ್ (GIZ)
ವರ್ಗ : ಕೃಷಿ / ಫಾರ್ಮ್
ಪಾಲುದಾರಿಕೆಯ ವ್ಯಾಪ್ತಿ: “Support to Agroecological Transformation Processes – SuATI” ಎಂಬ ಇಂಡೋ-ಜರ್ಮನ್ ದ್ವಿಪಕ್ಷೀಯ ಉಪಕ್ರಮವನ್ನು ಜಿಐಝಡ್ ಇಂಡಿಯಾ (GIZ India) ಮತ್ತು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು (Ministry of Rural Development) ಜಂಟಿಯಾಗಿ ಅನುಷ್ಠಾನಗೊಳಿಸುತ್ತಿದೆ. ಈ SuATI ಯೋಜನೆಯು ಗ್ರಾಮೀಣ ಭಾರತದಲ್ಲಿನ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರ ಜೀವನೋಪಾಯವನ್ನು ಹೆಚ್ಚಿಸಲು ಮೌಲ್ಯ ಸರಪಳಿ, ಕೃಷಿ ಕ್ಲಸ್ಟರ್ ಮತ್ತು ಸಮುದಾಯದ ಸಹಭಾಗಿತ್ವದ ಮೂಲಕ ಕೃಷಿ ಪರಿಸರ ಪರಿವರ್ತನೆಯನ್ನು (agro ecological transformation) ಉತ್ತೇಜಿಸಲು ದೀನದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ಗೆ (DAY-NRLM), ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಸಕ್ರಿಯವಾಗಿ ತಾಂತ್ರಿಕ ಬೆಂಬಲವನ್ನು ನೀಡುತ್ತದೆ.
ಪಾಲುದಾರ ವೆಬ್‌ಸೈಟ್: https://www.giz.de/en/html/index.html