ಮುಖ್ಯ ವಿಷಯಕ್ಕೆ ತೆರಳಿ |
ಸಹಯೋಗಿ ಸಂಸ್ಥೆಗಳಿಗೆ ಹಿಂತಿರುಗಿ

ವರ್ಗ : ಕೃಷಿಯೇತರ

ಪಾಲುದಾರಿಕೆಯ ವ್ಯಾಪ್ತಿ: ಸ್ಥಳೀಯ ಸಮುದಾಯಗಳು, ಕುಶಲಕರ್ಮಿಗಳು, ನೇಕಾರರು ಮತ್ತು ಸಹಕಾರ ಸಂಘಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಸ್ಥಳವನ್ನು ಬಳಸಲು ಅನುವು ಮಾಡಿಕೊಡುವ ಮೂಲಕ ಅವರಿಗೆ ಸಹಾಯ ಮಾಡಲು ಗ್ರಾಮೀಣಾಭಿವೃದ್ಧಿ ಸಚಿವಾಲಯವು ರಿಲಯನ್ಸ್ ರಿಟೇಲ್ ಲಿಮಿಟೆಡ್ (“ಜಿಯೋ ಮಾರ್ಟ್” - Jio Mart) ನೊಂದಿಗೆ 22ನೇ ಡಿಸೆಂಬರ್ 2023 ರಂದು ಕೈಜೋಡಿಸಿದೆ.
1) ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ನ (National Rural Livelihood Mission) ಸ್ವಸಹಾಯ ಗುಂಪಿನ ಸದಸ್ಯರನ್ನು ಜಿಯೋ ಮಾರ್ಟ್‌ನಲ್ಲಿ (JioMart) ಮಾರಾಟಗಾರರಾಗಿ ಸೇರಿಸುವ (onboarding) ಮೂಲಕ ಅವರಿಗೆ ಮಾರುಕಟ್ಟೆ ಪ್ರವೇಶವನ್ನು (market access) ಒದಗಿಸುವುದು.
2) ಇದು ದೇಶದ ಹಲವಾರು ಕುಶಲಕರ್ಮಿಗಳಿಗೆ (artisans) ಸ್ವಸಹಾಯ ಗುಂಪು ಮತ್ತು ಅವುಗಳ ಒಕ್ಕೂಟಗಳ ಮೂಲಕ ಅವರ ಉತ್ಪನ್ನಗಳನ್ನು ಜಿಯೋ ಮಾರ್ಟ್‌ನಲ್ಲಿ (Jio Mart) ಪಟ್ಟಿ (list) ಮಾಡಲು ಬೆಂಬಲ ನೀಡುತ್ತದೆ.
3) ಪ್ರಾಜೆಕ್ಟ್ ಮಾನಿಟರ್ ಗ್ರೂಪ್ (Project Monitor Group) ಜಿಯೋ ಮಾರ್ಟ್ ಪ್ಲಾಟ್‌ಫಾರ್ಮ್‌ನಲ್ಲಿ (Jio Mart Platform) ಮಾರಾಟಗಾರರ ಸೇರ್ಪಡೆ (seller onboarding), ಸಮಯೋಚಿತ ವಿತರಣೆ (timely delivery), ಸಮಯೋಚಿತ ಪಾವತಿ (timely payment) ಮತ್ತು ಕಾರ್ಯಾಚರಣೆಯ ಬೆಂಬಲವನ್ನು (operational support) ಮೇಲ್ವಿಚಾರಣೆ ಮಾಡುತ್ತದೆ.
4) ಸಾರ್ವಜನಿಕ ಸಂವಹನದಲ್ಲಿ (public communication) ಅವರು ಪರಸ್ಪರರ (mutually) ಕೊಡುಗೆಯನ್ನು (contribution) ಒಪ್ಪಿಕೊಳ್ಳುತ್ತಾರೆ.

frame