ಮುಖ್ಯ ವಿಷಯಕ್ಕೆ ತೆರಳಿ |
ಸಹಯೋಗಿ ಸಂಸ್ಥೆಗಳಿಗೆ ಹಿಂತಿರುಗಿ

ವರ್ಗ : ಫೈನಾನ್ಷಿಯಲ್ ಇನ್ಕ್ಲೂಷನ್ (ಎಫ್.ಐ.)

ಪಾಲುದಾರಿಕೆಯ ವ್ಯಾಪ್ತಿ: ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಸಾ-ಧನ್ (SA-DHAN) ಸ್ವಸಹಾಯ ಗುಂಪಿನ (Self Help Group) ಪ್ರಬುದ್ಧ ಸದಸ್ಯರಲ್ಲಿ ಮಹಿಳಾ ನೇತೃತ್ವದ ಉದ್ಯಮಗಳನ್ನು ಉತ್ತೇಜಿಸಲು ಮಾರ್ಚ್ 22, 2024 ರಂದು ಕೈಜೋಡಿಸಿವೆ. ಆಯ್ದ ರಾಜ್ಯಗಳಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ನಿರ್ವಹಿಸಲು ಮತ್ತಷ್ಟು ತಿಳಿಸಲಾಯಿತು.
1) ಆಯ್ದ ರಾಜ್ಯಗಳಲ್ಲಿ ಮಹಿಳಾ ಉದ್ಯಮಗಳ ಸಾಮರ್ಥ್ಯದ (potential of women enterprises) ಕುರಿತು 'ವ್ಯಾಪ್ತಿ ವರದಿ'ಯನ್ನು (scoping report) ಸಿದ್ಧಪಡಿಸುವುದು.
2) ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (State Rural Livelihood Mission) ಮತ್ತು ಪ್ರಮುಖ ಹಣಕಾಸು ಸಂಸ್ಥೆಗಳ (leading financing Institutions) ನಡುವಿನ ಪಾಲುದಾರಿಕೆಯನ್ನು ಸುಗಮಗೊಳಿಸುವುದು.
3) ಮಧ್ಯಪ್ರವೇಶಕ್ಕಾಗಿ (intervention) ಸೂಕ್ತವಾದ ಡಿಜಿಟಲ್ ಪರಿಕರಗಳನ್ನು (digital tools) ಅಭಿವೃದ್ಧಿಪಡಿಸಲು DAY-NRLM ಗೆ ಬೆಂಬಲ ನೀಡುವುದು.
4) DAY-NRLM ನ ಪಾಲುದಾರಿಕೆಯಲ್ಲಿ ಸಂಬಂಧಿತ ಮಧ್ಯಸ್ಥಗಾರರೊಂದಿಗೆ (relevant Stakeholders) ಕಾರ್ಯಾಗಾರಗಳು (workshops), ಸಮಾಲೋಚನೆಗಳು (consultations) ಮತ್ತು ತರಬೇತಿ ಕಾರ್ಯಕ್ರಮಗಳನ್ನು (training Programmes) ನಡೆಸುವುದು.
5) ಉದ್ಯಮಿಗಳಿಗಾಗಿ (entrepreneurs) ಬಡ್ಡಿ ಸಬ್ವೆನ್ಷನ್‌ಗೆ (interest Subvention) ಸಂಬಂಧಿಸಿದ ಯೋಜನೆಗಳನ್ನು (Schemes) ಅಭಿವೃದ್ಧಿಪಡಿಸುವುದು.

frame